ಲಾಕ್ ಡೌನ್ ಶಾಪ


ಮಾಲಿನಲ್ಲಿ ಅದೆಷ್ಟು ಮಾಡಿದೆವು ಶಾಪ
ವೀಕೆಂಡಿನಲ್ಲಿ ತುಂಬಿ ತುಂಬಿ ತಂದೆವು ಪಾಪ
ಪ್ಲಾಸ್ಟಿಕ್ ಚೀಲಗಳಲ್ಲಿ ಕಂಡ ಪ್ರತಿ ಇಂದ್ರಚಾಪ
ಆನ್ಲೈನ್ ಖರೀದಿಯಂತೂ ಇಪ್ಪತ್ನಾಕು ಬಾರ್ ಏಳು
ಹಚ್ಚಿಕೊಂಡೆವು ಕ್ಲಿಕ್ ಮಾಡಿ ತರಿಸುವ ಗೀಳು
ಮನೆಗೇ ಹರಿಯಿತು ಕಾಮಧೇನುವಿನ ಹಾಲು
ಮನೆಗೆ ಬಂದ ಪೀಟ್ಸಾ ತಣ್ಣಗಾಗಿದೆ ಎಂದು
ಮೂಗು ಮುರಿದೆವು ಬೈದಾಡಿಕೊಂಡು
ಡ್ರೋನ್ ತರಲಾರದೇ ಹಾರುತ್ತಾ ಬಂದು?
ಓಲಾಡಿ ಹೊರಟೆವು ಓಲಾ ಊಬರುಗಳಲ್ಲಿ
ಕಬಳಿಸಿದವು ನಗರಗಳು ಒಂದೊಂದೇ ಹಳ್ಳಿ
ಹಬ್ಬಿದಷ್ಟೂ ರಿಸಾರ್ಟ್ ಕನಸುಗಳ ಬಳ್ಳಿ.
ತಟ್ಟಿಬಿಟ್ಟಿತು ನಮಗೆ ಪ್ರಾಣಿಪಕ್ಷಿಗಳ ಶಾಪ
ತೋಡಿಕೊಂಡೆವು ನಮಗಾಗಿ ನಾವೇ ಕೂಪ.

ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)