ಶಿಷ್ಯ (ಕವಿತೆ)

ಮೂಲ: ಆಸ್ಕರ್ ವೈಲ್ಡ್
ಅನುವಾದ: ಸಿ.ಪಿ. ರವಿಕುಮಾರ್
Selective Focus Photography of Yellow Flowers

ನಾರ್ಸಿಸಸ್ ಸತ್ತಾಗ ಅವನ ಅಚ್ಚುಮೆಚ್ಚಿನ ಸಿಹಿನೀರಿನ ಕೊಳ
ಉಪ್ಪು ಕಣ್ಣೀರಿನ ಮಡುವಾಗಿಹೋಯ್ತು.

ಕೇಳಿದಾಗ ಈ ಸಂಗತಿ
ಗಿರಿಕಿನ್ನರಿಯರು ಹಾರಿ ಬಂದು
ನಿಜಕ್ಕೂ
ಸಿಹಿನೀರಿನ ಕೊಳ
ಉಪ್ಪು ಕಣ್ಣೀರ ಮಡುವಾಗಿದ್ದು ಕಂಡು
ಸಂತೈಸಿದರು ತಮ್ಮ ನೀಳ ಹಸಿರುಕೇಶವನ್ನು
ಇಳಿಬಿಟ್ಟು ಕೊಳದೊಳಗೆ.

ನಿನ್ನ ದುಃಖ ನನಗೆ ಅರ್ಥವಾಗುತ್ತದೆ!
ನಾರ್ಸಿಸಸ್‌ನಂಥ ಚೆಲುವನಿರಲಿಲ್ಲ ಬೇರೊಬ್ಬ!

ಕುತೂಹಲದಿಂದ ಕೇಳಿತು ಕೊಳ:
ನಾರ್ಸಿಸಸ್ ಚೆಲುವನಾಗಿದ್ದನೇ?

ನಿನಗಿಂತಲೂ ಚೆನ್ನಾಗಿ ಬಲ್ಲವರಾರು ಈ ವಿಷಯ?
ನಿನ್ನ ಮೊಗದ ಕನ್ನಡಿಯಲ್ಲಿ
ಅವನು ನೋಡಿಕೊಳ್ಳುತ್ತಿರಲಿಲ್ಲವೇ ತನ್ನ ಮುಖ!

ಕೊಳವು ಉತ್ತರಿಸಿತು: ಹೌದೇ!
ಅವನು ಬಾಗಿ ನೋಡಿದಾಗ ಅವನ ಕಣ್ಣಲ್ಲಿ
ನಾನು ನನ್ನ ಸೌಂದರ್ಯವನ್ನು ನೋಡಿ ಹಿಗ್ಗುತ್ತಿದ್ದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)