ನನ್ನ ಹೊಸ ಬ್ಲಾಗ್ "ಸಿ. ಪಿ. ಸಂಪದ"


ಡಾ. ಸಿ. ಪಿ. ರವಿಕುಮಾರ್ 

ನ್ನ ಹೊಸ ಬ್ಲಾಗ್ "ಸಿ. ಪಿ. ಸಂಪದ"  ನೋಡಿದ್ದೀರಾ? ಸುಮಾರು ಇಪ್ಪತ್ತೈದು ವರ್ಷಗಳಿಗೂ ಹಿಂದೆ ನಾನು ಕಂಪ್ಯೂಟರ್ ಕುರಿತು ಬರೆದ ಕೆಲವು ಲೇಖನಗಳು ಕನ್ನಡಪ್ರಭ ಪತ್ರಿಕೆಯ ರವಿವಾರದ ಪುರವಣಿಯಲ್ಲಿ ಪ್ರಕಟವಾದವು. ಇವುಗಳನ್ನು ಒಟ್ಟುಗೂಡಿಸಿ "ಕಂಪ್ಯೂಟರ್ ಗೊಂದು ಕನ್ನಡಿ" ಎಂಬ ಹೆಸರಿನಲ್ಲಿ ಅಭಿನವ ಪ್ರಕಾಶನ ಪ್ರಕಟಿಸಿತು. ಈ ಲೇಖನಗಳನ್ನು "ಜನಪ್ರಿಯ ವಿಜ್ಞಾನ" ಮಾದರಿಯಲ್ಲಿ ಬರೆದಿದ್ದೆ. ಈ ಪುಸ್ತಕದ ಪ್ರತಿಗಳು ಬಹಳ ಬೇಗ ಮುಗಿದು ಹೋದವು.



ಅನೇಕ ವರ್ಷಗಳ ನಂತರ ಮತ್ತೊಮ್ಮೆ ಈ ಕೆಲಸಕ್ಕೆ ಹಿಂದಿರುಗಲು ಮನಸ್ಸಾಯಿತು. "ಸಿ.ಪಿ. ಸಂಪದ" ಬ್ಲಾಗ್ ಬರಹಗಳಲ್ಲಿ ಕಂಪ್ಯೂಟರ್ ಕುರಿತಾದ ವಿಷಯಗಳನ್ನು ಆದಷ್ಟೂ ಸರಳವಾಗಿ ಬರೆಯಲು ಪ್ರಯತ್ನಿಸುತ್ತಿದ್ದೇನೆ. ಕನ್ನಡದಲ್ಲಿ ಓದಿದ ಮಕ್ಕಳಿಗೆ ಇವು ಉಪಯುಕ್ತವಾಗಬಹುದು ಎಂಬುದು ನನ್ನ ಆಸೆ. "ಕನ್ನಡವನ್ನು ಕಲಿಯುವುದರಲ್ಲಿ  ಅರ್ಥವೇ ಇಲ್ಲ" ಎಂಬ ನಿರ್ಣಾಯಕ ಮಾತುಗಳನ್ನು ಆಗಾಗ ಕೇಳಿದಾಗ ಆಘಾತವಾಗುತ್ತದೆ; ಈಗ ಬಂದಿರುವ ಸುಪ್ರೀಂ ಕೋರ್ಟ್ ತೀರ್ಮಾನವು ಕನ್ನಡ ಶಾಲೆಗಳಿಗೆ ಈಗಾಗಲೇ ಬಂದಿರುವ ದುರ್ಗತಿಯನ್ನು ಇನ್ನಷ್ಟು ತೀವ್ರಗೊಳಿಸಬಹುದು ಎಂಬ ಅಳುಕು ಕಾಡುತ್ತದೆ. ಕನ್ನಡದಲ್ಲಿ ಪ್ರೊಫೆಶನಲ್ ಎಜುಕೇಷನ್ ಸಾಧ್ಯವಾಗಿದ್ದಿದ್ದರೆ ಹೀಗೆ ನಮ್ಮ ಭಾಷೆಯನ್ನು ಕುರಿತು ನಿರ್ಲಕ್ಷ್ಯ ಇರುತ್ತಿರಲಿಲ್ಲ. ಈ ದಿಕ್ಕಿನಲ್ಲಿ ನಾವು ಗಮನ ಹರಿಸಿ ಪರಿಹಾರವನ್ನು ಹುಡುಕಬೇಕಾಗಿದೆ. ಆಗಬೇಕಾದ ಕೆಲಸ ತುಂಬಾ ಇದೆ.

ಕನ್ನಡಭಾಷೆಯಲ್ಲಿ  ವೈಜ್ಞಾನಿಕ ಬರಹಗಳು ಬಹಳ ಕಡಿಮೆ ಎಂದು ಕೇಳುತ್ತಲೇ ಇರುತ್ತೇವೆ.  ಇರುವ ಮತ್ತು ಬರುವ ವೈಜ್ಞಾನಿಕ ಬರಹಗಳನ್ನು ಜನರಿಗೆ ತಲುಪಿಸುವ ಕೆಲಸವೂ ಬಹಳ ಮುಖ್ಯ. ನಾನು ಯಾರನ್ನು ಗುರಿಯಲ್ಲಿ ಇಟ್ಟುಕೊಂಡು ಈ ಬ್ಲಾಗ್ ಬರಹಗಳನ್ನು ಬರೆದೆನೋ ಆ ಮಕ್ಕಳು ಅಥವಾ ಯುವಜನರಿಗೆ ಈ ಬರಹಗಳು ಲಭ್ಯವೇ ಎಂಬ ಸಂದೇಹ ನನ್ನನ್ನು ಕಾಡುತ್ತದೆ.  ಸಾಧ್ಯವಾದಷ್ಟೂ ನಾವು ಉಪಯುಕ್ತ ಕನ್ನಡ ಬರಹಗಳನ್ನು ಮಿತ್ರರೊಂದಿಗೆ ಹಂಚಿಕೊಳ್ಳುವುದರಿದ ಈ ಕಾರ್ಯ ಸುಲಭವಾದೀತು.  ನಿಮ್ಮ ಪ್ರತಿಕ್ರಿಯೆಗಳಿದ್ದರೆ ಖಂಡಿತ ತಿಳಿಸಿ!

ಸಿ.ಪಿ. ಸಂಪದ ಓದಲು ಇಲ್ಲಿ ಕ್ಲಿಕ್ ಮಾಡಿ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)