ವ್ಯವಸ್ಥೆ ಬದಲಾಯಿಸುತ್ತಿದೆ


ಮೂಲ ಉರ್ದೂ ... ಜಾಹಿದ್ ಮಸೂದ್
ಕನ್ನಡಕ್ಕೆ .. ಸಿ.ಪಿ. ರವಿಕುಮಾರ್
Photo of Green Data Matrix

ವ್ಯವಸ್ಥೆ ಬದಲಾಯಿಸುತ್ತಿದೆ.
ಹೊಸ ನಾಣ್ಯಗಳು ಚಾಲ್ತಿಗೆ ಬಂದಾಗಿದೆ.
ಹೊಸ ರಿಜಿಸ್ಟರುಗಳಲ್ಲಿ ಹಳೆಯ ಅಂಕಿಗಳು
ನೊಣಗಳ ಹಾಗೆ ಗುಂಯ್ಗುಡುತ್ತಿವೆ
ಕೀಬೋರ್ಡಿಗೆ ಸರಪಳಿಯಿಂದ ಕಟ್ಟಿಹಾಕಿದ ಕೈ
ಸಪ್ತವರ್ಣದ ಆಕಾಶದ ಕದತಟ್ಟುವ ಪ್ರಯಾಸ ಮಾಡುತ್ತಿದೆ.
ನಿಯಾನ್ ಸೈನಿನಿಂದ ಹೊರಬಂದ ಯುವತಿ
ಖಾಲಿಜೋಬುಗಳತ್ತ ಸನ್ನೆ ಮಾಡಿ ಮುಗುಳಗುತ್ತಾಳೆ.
ನವಯೌವ್ವನ ತಾಳಿದ ವೃದ್ದರು ನೆಕ್ ಟೈ ಧರಿಸಿ
ಫೈವ್ ಸ್ಟಾರ್ ಹೋಟೆಲಿನ ಎದುರು ಎಸೆದ ಬಾಟಲಿಗಳಲ್ಲಿ
ಮನಿಪ್ಲಾಂಟ್ ಬೆಳೆಸುವ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ.
ಪಾಲಕರು ಮಲಿನ ರಜಾಯಿಗಳಲ್ಲಿ ಹಾಟ್ ವಾಟರ್ ಬಾಟಲ್ ಇಟ್ಟುಕೊಂಡು
ಪೂರ್ವಜರ ಕಬ್ರಸ್ಥಾನಗಳ ಕನಸು ಕಾಣುತ್ತಿದ್ದಾರೆ.
ಮಕ್ಕಳು ಮೂಸಿಕ್ ಚಾನೆಲ್ ಸಂಗೀತಕ್ಕೆ "ಇಡೀ ಪ್ರಪಂಚವೇ ಒಂದು ಹಳ್ಳಿ" ಹಾಡುತ್ತಾರೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)